೧. ಬಂಡಾಯದ ವಿಪರ್ಯಾಸ
ತಂದೆ ತಾಯಿ ಮಾತಿಗೆ ಕಟ್ಟುಬಿದ್ದು
ಮಠಕ್ಕೆ ಹೋಗಲು ನಿರಾಕರಿಸಿದ ಯುವಕ
ಸ್ನೇಹಿತನ ಮಾತಿಗೆ ಕಟ್ಟುಬಿದ್ದು
ನೊರೆ ನೊರೆಯಾದ ಬೀರು ಕುಡಿದ!
೨. ಸ್ಪೂರ್ತಿ
ಪ್ರಶಸ್ತಿ ಪಡೆದ ಮರುದಿನ
ಫೈವ್ ಸ್ಟಾರ್ ಹೋಟಲಲ್ಲಿ ಕುಳಿತು
ಕವಿತೆಗೆ ತಿಣುಕಿದ ಸಾಹಿತಿ
ಗಲ್ಲಿ ಸಾರಾಯಿ ಅಂಗಡಿಯಲ್ಲಿ ಕುಳಿತು
ಪುಟಗಟ್ಟಲೆ ಪದ್ಯ ಬರೆದ!
೩. ಈಗ ಹೇಳಿ ಕಾರಣ
ಮೊದಲೆಲ್ಲ ಸರಾಗವಾಗಿ ಸಾಗುತಿದ್ದ ರಸ್ತೆಗಳಲ್ಲಿ
ಈಗ ಹೆಜ್ಜೆ ಹೆಜ್ಜೆಗೂ ಟ್ರಾಫಿಕ್ ಸಿಗ್ನಲ್ಲು
ಉಂಡು ಮಲಗಿ ಮರೆಯುತ್ತಿದ್ದ ಗಂಡಹೆಂಡಿರ ಜಗಳಗಳೆಲ್ಲ
ಕೊನೆಯಾಗುತಿವೆ ಕೋರ್ಟ್, ಕಛೇರಿ ಮತ್ತು ಡೈವರ್ಸು!
Subscribe to:
Post Comments (Atom)
2 comments:
3 hanigalu, thumba chennagidhe :-)
Kavi varyarige, jeevanadha rasa chennagi gottu annisutte :-)
thumba chennaagidhe
Post a Comment