Showing posts with label ಪ್ರಾಥನೆ ಜೀಸಸ್ ಕ್ರೈಸ್ತ ಕನ್ನಡ ಕವನ ವಿದ್ಯಾಶಂಕರ್ ಹರಪನಹಳ್ಳಿ. Show all posts
Showing posts with label ಪ್ರಾಥನೆ ಜೀಸಸ್ ಕ್ರೈಸ್ತ ಕನ್ನಡ ಕವನ ವಿದ್ಯಾಶಂಕರ್ ಹರಪನಹಳ್ಳಿ. Show all posts

Wednesday, April 8, 2009

ಪ್ರಾರ್ಥನೆ

World has been unfair to Jesus Christ. First they crucified him and later churchified his message.
ಪ್ರಾರ್ಥನೆ
-೧-
ನಾವೆಲ್ಲ ಲೋಕ ನಿಂದಿತರು
ಪಾಪಿಷ್ಠರು, ಸಮಾಜ ಭ್ರಷ್ಠರು
ಕೊರಳೆತ್ತಿ ಮೊರೆಯಿಟ್ಟಾಗ
ನೀನು ದೇವರಂತೆ ಭುವಿಗೆ ಬಂದೆ
ಪ್ರೀತಿಯ ಸಂದೇಶ ಹೊತ್ತುತಂದೆ
ಶಾಂತಿ ಸಹಬಾಳ್ವೆಯ ಪಸರಿಸಿದೆ
ಸ್ವರ್ಗವಾಯಿತು ಈ ಧರೆ!
-೨-
ಆದರೆ, ತುಂಬ ದಿನ ಒಳಿಯಗೊಡಲಿಲ್ಲ ಆ ಜನ
ನೀನು ಪ್ರೀತಿಸಿದಷ್ಟು ಅವರು ಕ್ರೂರಿಯಾದರು
ಕೊನೆಗೆ ಏರಿಸೆ ಬಿಟ್ಟರು ನಿನ್ನ ಶಿಲುಬೆಗೆ!
ಲೋಕವೆಲ್ಲ ತಲೆ ತಗ್ಗಿಸಿತು ಪಾಪಪ್ರಙ್ನೆಯಿಂದ
ಅದರೊಂದಿಗೆ ಪ್ರೀತಿಯ ಸಂದೇಶವಾಯಿತು ನಿನ್ನ ಜೀವನ!
-೩-
ಎರಡು ಸಾವಿರ ವರುಷವಾದರು ನಿಂತಿಲ್ಲ ಆ ಕ್ರೂರ ಕೃತ್ಯ
ಮನು ಕುಲವು ಅರಿತಿಲ್ಲ ನಿನ್ನ ಸಂದೇಶದ ಸತ್ಯ
ಯುದ್ಧಗಳು ನಿನ್ನ ಹೆಸರಿನಿಲಿ ಸೇವೆಯು ನಿನ್ನ ಹೆಸರಿನಲಿ
ಕೊನೆಗೆ ಸೃಷ್ಟಿಸಿದರು ಮಾನವಗು ಮತ್ತು ದೇವರಿಗೂ ಅಂತರ
ಅಮೇಲೆ ನಡಸಿದರು ಮತಾಂತರ
ಉದ್ಧರಿಸು ದೇವ ಈ ಧರ್ಮಾಂಧರ!