Tuesday, December 15, 2009

ಸರಕಾರಿ ದಾಖಲೆ

ಸರಕಾರಿ ದಾಖಲೆ
ಚಿಕ್ಕವಳಿದ್ದಾಗ ಶಾರಿಯಾಗಿದ್ದ
ನಾನು ಬೆಳದಂತೆ ಶಾರದಾ ಅದೆ
ಮುಂದೆ ಮಕ್ಕಳಾದಂತೆ ಶಾರದಮ್ಮ
ನೆಂಟರಿಷ್ಟರಿಗೆ ಮಾವಿನಕೆರೆ ಶಾರದ
ಮೊಮ್ಮಕ್ಕಳಿಗೆ ಶಾರದಜ್ಜಿಯಾದೆ
ಆದರೆ ಸರಕಾರಿ ದಾಖಲೆಯಲ್ಲಿ
ನನ್ನ ಗುರುತು ಹುಟ್ಟಿದಾರಬ್ಯ K. L. ಶಾರದಾ!!!
- ವಿದ್ಯಾಶಂಕರ್ ಹರಪನಹಳ್ಳಿ

Monday, December 7, 2009

Thought For The Day

Just because mobile tariff is cheap don't spend too much time on phone, Your time is more precious to be spent on phone, even when the tariff is as low as 1 paisa per second.
- Guruji

ಕನ್ನಡ ಚುಟಕಗಳು

ವರ-ಲಕ್ಷ್ಮಿ
ವರಲಕ್ಷ್ಮಿ ಎಂಬ ಹುಡುಗಿಯ
ನೊಡಲು ಬಂದ ವರವರಧಕ್ಷಿಣೆಯ ಮಾತೆತ್ತಿದಾಗ
ನಮ್ಮ ಹುಡುಗಿ
ವರನಿಗೆ ನಾನೆ ಲಕ್ಷ್ಮಿಯಾಗಿರುವಾಗ
ಧಕ್ಷಿಣೆಯ ಮಾತೆ ಎಕೆ? ಎನ್ನಬೇಕೆ!

ಸೂಟು, ಬೂಟು ಮತ್ತು ಸೌಟು
ಮದುವೆಯ ಮನೆಯಲ್ಲಿ ಮಾವ
ಕೊಟ್ಟ ಸೂಟು, ಬೂಟು
ನಂತರ ಹೆಂಡತಿ ಕೈಗೆ
ಕೊಟ್ಲು ಬಾಂಡ್ಲೆ ಸೌಟು

ರಾಷ್ಟ್ರ-ಪತಿ

ಎಲ್ಲಾರು ಮದುವೆ ಆದಮೇಲೆ
ಸತಿ-ಪತಿ
ಅದರೆ ಬ್ರಹ್ಮಚಾರಿ ಕಲಾಂ
ರಾಷ್ಟ್ರಕ್ಕೆ ಪತಿ!

- ಕೃಷ್ಣ ಮೂರ್ತಿ ಹರಪನಹಳ್ಳಿ
( ವಿದ್ಯಾಶಂಕರ್ ಹರಪನಹಳ್ಳಿಯವರ ತಂದೆ)

Thursday, November 19, 2009

ಮಳೆ ಮತ್ತು ಚಿತ್ರಸಾಹಿತಿಗಳು... (ಹಾಸ್ಯ ಲೇಖನ)

ಮಳೆ ಮತ್ತು ಚಿತ್ರಸಾಹಿತಿಗಳು... (ಹಾಸ್ಯ ಲೇಖನ)
:
:
Youtube Link to Audio Article : http://www.youtube.com/watch?v=j03-tGqyPH4
:
:
ಚಿತ್ರಪಟಕ್ಕೆ/ಧ್ವನಿಗಾಗಿ ಇಲ್ಲಿ ಒತ್ತಿ




ನಮಸ್ಕಾರ,

ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಮಳೆ ಬಂದು ಜಲ ಪ್ರಳಯವೇ ಆಗಿಹೋಯ್ತು. ಸಾಕಷ್ಟು ಕಷ್ಟ ನಷ್ಟಗಳೆಲ್ಲ ಸಂಭವಿಸಿದವು. ಏಕೆ? ಏಕೆ ಎಂದು ನಾನು ತುಂಬಾ ಗಾಢವಾಗಿ ಆಲೋಚಿಸಿದಾಗ, ನನಗನಿಸಿದ್ದು ಇದಕ್ಕೆಲಾ ಕಾರಣ ಚಿತ್ರ ಸಾಹಿತಿಗಳೇ ಎಂದು!
ಏನು! ಮಳೆ ಬಗ್ಗೆ ಹಾಡು ಬರೆದಿದ್ದೋ ಬರೆದಿದ್ದೂ...ಬರೆದಿದ್ದೋ ಬರೆದಿದ್ದೂ.... ಬಹುಶಃ ಈ ಹಾಡುಗಳನೆಲ್ಲಾ ಕೇಳಿ ವರುಣ ಖುಷಿಯಾಗಿ ಕಂಟ್ರೋಲ್ ತಪ್ಪಿ ಧೋ ಅಂತ ಹೊಯ್ದ ಅನಿಸುತ್ತೆ, ಸ್ವಲ್ಪ ಅತಿನೇ ಆಯ್ತು ಅಂತ ಅನಿಸುತ್ತೆ. ನೊಡೀ ಅಣ್ಣಾವ್ರು ಆಗಿನ ಕಾಲಕ್ಕೆ ವಾರ್ನಿಂಗ್ ಕೊಟ್ರು...
"ಮೇಘ ಬಂತು ಮೇಘ, ಮೆಘ ಬಂತು ಮೆಘ, ಮಲ್ಹಾರ ಮೆಘ", (ಸಿನಿಮಾ : ಮೇಘ ಬಂತು ಮೇಘ)
ಆದ್ರೆ ಯಾರೂ ಎಚ್ಚೆತ್ತು ಕೊಳ್ಳಲ್ಲಿಲ್ಲ. ಪಾಪ! ಒಂದು ಹುಡುಗಿ ಹಾಡಿದಳು
"ಮಳೆ ಬರುವ ಹಾಗಿದೆ... ಮಳೆ ಬರುವ ಹಾಗಿದೆ..." (ಸಿನಿಮಾ : ಮೊಗ್ಗಿನ ಮನಸು)
ಅದಕ್ಕೂ ಯಾರು ಏಚ್ಚೆತ್ತುಕೊಳ್ಳಿಲ. ನಮ್ಮ ಸರ್ಕಾರ, ಹವಮಾನ ಇಲಾಖೆಯವರು ಯಥಾ ಪ್ರಕಾರ warning ignore ಮಾಡಿಬಿಟ್ರು... ಯಾರು ಗಮನಿಸಲಿಲ್ಲ...
ಅಮೇಲೆ ಮಳೆ ಬಂತು. ಈ ಸಿನಿಮಾದವ್ರು ಮಳೆ ಬಂತು ಅಂತ ಖುಷಿಯಿಂದ ಕುಣಿದಾಡಿಬಿಟ್ರು. ಎನೆಂದು...
"ಮಳೆ ಬಂತು ಮಳೆ ಮಳೆ ಮಳೆ...ಹನಿ ಹನಿ ಹನಿಯಗಿ ಬಂದಿತು..." (ಸಿನಿಮಾ : ಮಳೆ ಬಂತು ಮಳೆ)
ಹೀಗೆ ಕೆಲವರು ಅಬ್ಬರದಿಂದ ಹಾಡಿ ಕುಣಿದರೆ, ಕೆಲವರು ಕಾವ್ಯತ್ಮಕವಾಗಿ ಹಾಡಿದರು, ಎನೆಂದು...
"ಮುಂಗಾರು ಮಳೆಯೇ... ಎನು ನಿನ್ನ ಹನಿಗಳ ಲೀಲೆ" (ಸಿನಿಮಾ :ಮುಂಗಾರು ಮಳೆ)
ಹೀಗೆ ಕೆಲವರು ಕಾವ್ಯತ್ಮಕವಾಗಿ ಎಂಜಾಯ್ ಮಾಡಿದ್ರೆ ಎನ್ನು ಕೆಲವರು ಡೇಂಜರಸಾಗಿ ಹೀಗೆಂದರು....
"ಬಾ ಮಳೆಯೆ ಬಾ...ಅಷ್ಟು ಬಿರುಸಾಗಿ ಬಾರದಿರು.." (ಸಿನಿಮಾ : ಆಕ್ಸಿಡೆಂಟ್)
ನನ್ನ ಹುಡಗಿ ಬಂದ ಮೇಲೆ ಜೊರಾಗಿ ಬಾ, ಅವಳು ವಾಪಸ್ ಹೊಗ್ದೆ ಇರ‍್ಲಿ ಅಂತ ಡೇಂಜರಸಾಗಿ ಹಾಡಿದರು.
ಆಮೇಲೆ ಮಳೆ ನಿಂತು ಹೋಯಿತು ಆದ್ರು ಇವರ ಹಾಡು ಮುಗಿಲಿಲ್ಲ ನೋಡಿ...
"ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ..." (ಸಿನಿಮಾ : ಮಿಲನ) ಎಂದು ಹಾಡಿದ್ರು
ಅದೆಲ್ಲಾ ಆಗಿ ಮಳೆ ನಿಂತ್ರು ಇವ್ರ ಮಳೆ ಹುಚ್ಚು ಬಿಡಲಿಲ್ಲ ನೋಡಿ!
ಎಲ್ಲೋ ಪಕ್ಕದ ಊರಲ್ಲಿ ಮಳೆಯಾದ್ರೂ ಇವ್ರು ಅದಕ್ಕೂ ಒಂದು ಹಾಡು ಕಟ್ಟಿದ್ರು..
"ಎಲ್ಲೋ ಮಳೆಯಾಗಿದೆ ಎಂದು ತಂಗಾಳಿಯು ಹೇಳುತಿದೆ" (ಸಿನಿಮಾ :ಮನಸಾರೆ)
ಏನ್ ಸ್ವಾಮಿ! ಚಿತ್ರಸಾಹಿತಿಗಳೆ, ನೀವು ಈ ಪರಿ ಮಳೆ ಬಗ್ಗೆ ಹಾಡು ಬರೆದ್ರೆ ಹೇಗೆ?
ಈ ಹಾಡುಗಳನ್ನೆಲ್ಲಾ ಕೇಳಿ ವರುಣ ಸುರಿಸಿದ್ದೇ ಸುರಿಸಿದ್ದೂ...ಸುರಿಸಿದ್ದೇ ಸುರಿಸಿದ್ದೂ..ಜಲ ಪ್ರಳಯನೇ ಆಗಿಹೋಯ್ತು. ಸಾಗರದಲ್ಲಿ depression, oppression, suppression.... ಮಳೆಗೆ ಬರಿ ನೆಪ ಬಿಡಿ. ಅಷ್ಟೊಂದು ಮಳೆ ಬಂದು ಬೆಳೆ ಹಾಳಾಗಿ, ಜಲಪ್ರಳಯನೇ ಆಗಿಹೋಯ್ತು.
ಈ ಚಿತ್ರಸಾಹಿಗಳಲ್ಲಿ ನನ್ನ ವಿನಂತಿ ಏನಂದ್ರೆ...ಹಾಡು ಬರೆಯೋ ಹಾಗಿದ್ರೆ ಬಿಸಿಲ ಬಗ್ಗೆ, ಬಳ್ಳಾರಿ ಬಿಸಿಲ ಬಗ್ಗೆ ಬರೀರಿ. ಸ್ವಲ್ಪ ಬಿಸಿಲು ಮೂಡಿ ನಮ್ಮ ಪ್ಯಾಂಟು ಚಡ್ಡಿಗಳಾದ್ರೂ ಒಣಗಲಿ.
ಬಿಸಿಲ ಬಗ್ಗೆ ಏನಂತ ಬರಿಬಹುದು ಒಂದೆರಡು ಸ್ಯಾಂಪಲ್,
"ಬಳ್ಳಾರಿ ಬಿಸಿಲು ಎಷ್ಟೊಂದು ಸುಂದರ..."
ಅಥವಾ
"ಬಾ ಬಿಸಿಲೆ ಬಾ...."
ಇಂಥ ಹಾಡು ಕೇಳಿ ಸೂರ್ಯ ಹೊರಗೆ ಬಂದು ನಮ್ಮ ಚಡ್ಡಿಗಳಾದ್ರೂ ಒಣಗಲಿ. ನಾನು ಹೀಗೆಲ್ಲಾ ಚಿತ್ರಸಾಹಿತಿಗಳನ್ನ ದೂರುತ್ತಾ ಇದ್ದಾಗ ಅವ್ರು ಏನಂದ್ರು ಗೊತ್ತಾ?
"ಬಿಸಿಲಾದರೇನು... ಮಳೆಯಾದರೇನು...
ಜೊತೆಯಾಗಿ ಎಂದು ನಾವಿಲ್ಲವೇನು..."
ಹೀಗೆಂದು ಪಾದಯಾತ್ರೆ ಮಾಡಿ, ಹಣ ಸಂಗ್ರಹಿಸಿ, ನೆರೆ ಪರಿಹಾರ ನಿಧಿಗೆ ಕೊಟ್ರು. ಅವರೆಲ್ಲ ಒಳ್ಳೆಯವರು ಅವರಿಗೆಲ್ಲ ಒಳ್ಳೆದಾಗ್ಲಿ....
"ಜೈ ಕರ್ನಾಟಕ, ಜೈ ಭುವನೇಶ್ವರಿ...."

- ವಿದ್ಯಾಶಂಕರ್ ಹರಪನಹಳ್ಳಿ

Friday, November 6, 2009

ತಾಯಿ ನಸು ನಕ್ಕಳು!



ತಾಯಿ ನಸು ನಕ್ಕಳು!



ಶ್ರವನಬೇಳಗೊಲದಲ್ಲಿ ಸಾಧುಸಂತರು, ಮುನಿಗಳು
ಗೊಮ್ಮಟನಿಗೆ ಮಹಾ ಮಸ್ತಕಾಬಿಷೇಕ ಮಾಡಿ
ಪುಣ್ಯಗಳಿದ ಸಂಭ್ರಮದಲ್ಲಿರುವುದ ಕಂಡು
ತಾಯಿ ನಸು ನಕ್ಕಳು!

- ವಿದ್ಯಾಶಂಕರ ಹರಪನಹಳ್ಳಿ

Sunday, August 9, 2009

ಹನಿಗವನಗಳು

ಪುಟ್ಟನ ಪ್ರಶ್ನೆ
ಫಿಲ್ಟರ್ ನೀರು ಮಿನೆರಲ್ ವಾಟರ್
ಕೂಡಿಸಿ ಬೆಳಸಿನೆಂದು
ಜಂಭ ಕೊಚ್ಚಿದ ಅಪ್ಪನಿಗೆ
ಪುಟ್ಟನು ಕೇಳಿದ
ಇಷ್ಟೆಲ್ಲಾ ಪರಿಸರ ಹಾಳು ಮಾಡಿದ್ದು ಯಾರು?

ಮರ್ಯಾದೆಯ ಪ್ರಶ್ನೆ
ತಲೆಕೆಟ್ಟ ರಾವಣ ನನ್ನ ಹೆಂಡತಿಯ
ಹೊತ್ತ್ಯುದಾಗ ಯುದ್ಧ ಮಾಡಿ ಬಿಡಿಸಿಕೊಂಡು ಬಂದೆ
ಏಕೆಂದರೆ ಅದು ಮರ್ಯಾದೆಯ ಪ್ರಶ್ನೆ!
ಅಗಸನ ಮಾತಿಗೆ ಪ್ರಜಾ ಆರೋಪಕ್ಕೆ ಅಂಜಿ
ಮತ್ತೆ ಬಸರಿ ಹೆಂಡತಿಯ ಕಾಡಿಗೆ ಕಳುಹಿಸಿದೆ
ಏಕೆಂದರೆ ಅದು ಮರ್ಯಾದೆಯ ಪ್ರಶ್ನೆ !!

Wednesday, April 8, 2009

ಪ್ರಾರ್ಥನೆ

World has been unfair to Jesus Christ. First they crucified him and later churchified his message.
ಪ್ರಾರ್ಥನೆ
-೧-
ನಾವೆಲ್ಲ ಲೋಕ ನಿಂದಿತರು
ಪಾಪಿಷ್ಠರು, ಸಮಾಜ ಭ್ರಷ್ಠರು
ಕೊರಳೆತ್ತಿ ಮೊರೆಯಿಟ್ಟಾಗ
ನೀನು ದೇವರಂತೆ ಭುವಿಗೆ ಬಂದೆ
ಪ್ರೀತಿಯ ಸಂದೇಶ ಹೊತ್ತುತಂದೆ
ಶಾಂತಿ ಸಹಬಾಳ್ವೆಯ ಪಸರಿಸಿದೆ
ಸ್ವರ್ಗವಾಯಿತು ಈ ಧರೆ!
-೨-
ಆದರೆ, ತುಂಬ ದಿನ ಒಳಿಯಗೊಡಲಿಲ್ಲ ಆ ಜನ
ನೀನು ಪ್ರೀತಿಸಿದಷ್ಟು ಅವರು ಕ್ರೂರಿಯಾದರು
ಕೊನೆಗೆ ಏರಿಸೆ ಬಿಟ್ಟರು ನಿನ್ನ ಶಿಲುಬೆಗೆ!
ಲೋಕವೆಲ್ಲ ತಲೆ ತಗ್ಗಿಸಿತು ಪಾಪಪ್ರಙ್ನೆಯಿಂದ
ಅದರೊಂದಿಗೆ ಪ್ರೀತಿಯ ಸಂದೇಶವಾಯಿತು ನಿನ್ನ ಜೀವನ!
-೩-
ಎರಡು ಸಾವಿರ ವರುಷವಾದರು ನಿಂತಿಲ್ಲ ಆ ಕ್ರೂರ ಕೃತ್ಯ
ಮನು ಕುಲವು ಅರಿತಿಲ್ಲ ನಿನ್ನ ಸಂದೇಶದ ಸತ್ಯ
ಯುದ್ಧಗಳು ನಿನ್ನ ಹೆಸರಿನಿಲಿ ಸೇವೆಯು ನಿನ್ನ ಹೆಸರಿನಲಿ
ಕೊನೆಗೆ ಸೃಷ್ಟಿಸಿದರು ಮಾನವಗು ಮತ್ತು ದೇವರಿಗೂ ಅಂತರ
ಅಮೇಲೆ ನಡಸಿದರು ಮತಾಂತರ
ಉದ್ಧರಿಸು ದೇವ ಈ ಧರ್ಮಾಂಧರ!